ದುಬೈ: ಭಾರತೀಯ ಮೂಲದ 25 ವರ್ಷದ ಯುವಕನಿಗೆ ಒಂದು ಮಿಲಿಯನ್(6.5 ಕೋಟಿ ರೂ.) ಯುಎಸ್ ಡಾಲರ್ ಬಹುಮಾನ ಲಾಟರಿ ಹೊಡೆದಿದೆ.
ದುಬೈ ಡ್ಯೂಟಿ ಫ್ರೀ (ಡಿಡಿಎಫ್) ಅವರು ನಡೆಸಿದ ಮಿಲೆನಿಯಮ್ ಮಿಲಿಯನೇರ್ ಸ್ಪರ್ಧೆಯಲ್ಲಿ ಭಾರಿ ಮೊತ್ತದ ಬಹುಮಾನ ಧಾನೀಶ್ ಕೋಥರಂಬನ್ ಅವರಿಗೆ ಸಿಕ್ಕಿದೆ.
Advertisement
ಧಾನೀಶ್ ಮೂಲತಃ ಕೇರಳದವರಾಗಿದ್ದು, ದುಬೈನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ವಾರಗಳ ಹಿಂದೆ ಧಾನೀಶ್ ರಜೆಗೆಂದು ಕೇರಳಗೆ ಹೋಗುತ್ತಿದ್ದಾಗ ತಮ್ಮ ಮಿಲೆನಿಯಮ್ ಡಾಲರ್ ನ ಮೊದಲ ಟಿಕೆಟ್ ತೆಗೆದುಕೊಂಡಿದ್ದರು.
Advertisement
ಈ ಕುರಿತು ಧಾನೀಶ್ ಅವರು ಕೇರಳದಲ್ಲಿ ಮಾತನಾಡಿ, ಡಿಡಿಎಫ್ ಪ್ರತಿನಿಧಿಗಳಿಂದ ಮಿಲಿಯನ್ ಡಾಲರ್ ನಲ್ಲಿ ಗೆದ್ದಿರುವುದಾಗಿ ಕರೆ ಬಂದಾಗ ನನಗೆ ತಕ್ಷಣ ಆಶ್ಚರ್ಯವಾಯಿತು. ನಿಜವಾಗಿ ನಾನು ಗೆದ್ದಿರುವುದನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ನಾನು ಈ ದೊಡ್ಡ ಗೆಲುವು ಸಾಧಿಸಬಹುದೆಂದು ನಾನು ಭಾವಿಸಿರಲಿಲ್ಲ! ಈ ಅದ್ಭುತ ಕೊಡುಗೆಗಾಗಿ ದೇವರಿಗೆ ಮತ್ತು ದುಬೈ ಡ್ಯೂಟಿ ಫ್ರೀ ಧನ್ಯವಾದಗಳು” ಎಂದು ತಮ್ಮ ಖುಷಿಯನ್ನ ಹೇಳಿಕೊಂಡಿದ್ದಾರೆ.
Advertisement
ಈ ಹಿಂದೆ ಜನವರಿಯಲ್ಲಿ ಅಬುದಾಬಿಯಲ್ಲಿ ಯು.ಎ.ಇ.ನಲ್ಲಿ ಭಾರತೀಯ ಮೂಲದ ವ್ಯಕ್ತಿಗಳಿಗೆ ಭಾರೀ ಮೊತ್ತದ ಬಹುಮಾನ ಬಂದಿತ್ತು. ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದ ಮೆಗಾ ರಾಫೆಲ್ ಡ್ರಾನಲ್ಲಿ ಪ್ರತಿವರ್ಷ 1 ಮಿಲಿಯನ್ ಡಾಲರ್ (ಯುಎಸ್ಡಿ 2.7 ಲಕ್ಷ) ಗೆದ್ದುಕೊಂಡ 10 ಜನರ ಪೈಕಿ ಎಂಟು ಭಾರತೀಯರು ಸೇರಿದ್ದರು. ಈಗ ಧಾನೀಶ್ ಕೋಥರಂಬನ್ ಸುಮಾರು 6.5 ಕೋಟಿ ರೂ. ಬಹುಮಾನವನ್ನು ಗೆದ್ದಿದ್ದಾರೆ.
Advertisement
ಮಿಲೆನಿಯಮ್ ಮಿಲಿಯನೇರ್ ಎರಡನೇ ವಿಜೇತ ಯಾಝನ್ ಕ್ಯೂರ್ಔಟ್ ಆಗಿದ್ದು, ಇದು ತಮ್ಮ ಮದುವೆ ಆದ ನಂತರ ಎರಡನೇ ಖುಷಿ ಸಮಯ ಎಂದು ಹೇಳಿಕೊಂಡಿದ್ದಾರೆ.